Thursday, January 27, 2011


ಕೆಲವೊಂದು ಕವನ , ಹಾಡು ಅದೆಷ್ಟ ಕಾಡ್ತಾವ ಅಂದ್ರ ಹೆಳಾಕ ಆಗಾಂಗಿಲ್ಲ. ಅಂತಹ ಕೆಲವು ಹಾಡುಗಳ ಪೈಕಿ ನಮ್ಮ ಚಂದ್ರಶೇಖರ ಕಂಬಾರ ಸರ್‌ ಬರೆದಿರೊ ಈ ರಂಗ ಗೀತೆ ಕುಂತವ್ರುನ್ನು ಹುಚ್ಚೇಬಿಸಿ ಬಿಡತೈತಿ..... ಜೋಕುಮಾರ ಸ್ವಾಮಿ ನಾಟಕದಾಗ ಈ ಹಾಡ ಬರತೈತಿ... ಅದರ ಕೆಲವು ಸಾಲುಗಳು ಇಲ್ಲಿ ಅದಾವ.....

ಶರಣು ಹೇಳವ್ರಿ ಸ್ವಾಮಿ
ನಾವು ನಿಮಗ.... ಸ್ವಾಮಿ...ನಾವು ನಿಮಗ....
ಸದ್ದು ಗದ್ದಲ ಮಾಡಬ್ಯಾಡ್ರಿ...
ಆಟದೊಳಗ.....
ಸಣ್ಣ ಹುಡುಗರು ನಾವು...ಬಣ್ಣಕ ಹೆದರೊರು...
ಚೆನ್ನಾಗಿ ಕೇಳಿರಿ ನಮ್ಮ ಕವನ.....
ಕುಂತಿರೊ ಹಿಂಡ .. ಹೆಣ್ಣ- ಗಂಡ
ವರ್ತಿಸಬಾರದಿಲ್ಲಿ....
ಬುದ್ದಿವಂತರ ಪ್ರೀತಿ ನಮ್ಮ ಮ್ಯಾಲ....

ಭೂಸನೂರುಮಠದಯ್ಯ...
ಸಾವಳಗಿ ಶಿವಲಿಂಗ್..
ಇರಲೈಯ್ಯಾ ನಿಮ್ಮ ಪ್ರೀತಿ...ನಮ್ಮ ಮ್ಯಾಲ.....





No comments:

Post a Comment